Sunday, 2 March 2025

ಪ್ರೇಮಿಯೆಂಬ ಜಂಬ

 ಮರಳಿದ ಮನಸೇ 

ನಿನ್ನ ಕನಸಿಗೆ, ಕೊಡಲಾರೆ 

ತುಸು ಜಾಗವ 


ಎಲ್ಲವು ಹೊತ್ತೋಯ್ದ ನೀನು 

ಬರಿ ಕನಸ ತಂದರೆ, ಕಟ್ಟಲಾರೆ 

ಪ್ರೀತಿ ಗೋಪುರವ


ಇನ್ನುಳಿದಿರುವುದು ನಾನು 

ಮತ್ತೆ ಅವಳ ನೆನಪು, ಮರಯಲಾರೆ 

ಅವಳು ಬಿಟ್ಟು ಹೋದ ಆ ಕ್ಷಣವ 


ಬದುಕಲು ತುಸು ಕಷ್ಟ 

ಆದರು ಪ್ರೇಮಿಯೆಂಬ ಜಂಬ, ಸಾಲದೇ 

ಬದುಕಲು ಈ ಜಂಬವ?

Friday, 29 November 2024

ಕಾಯುತಿರುವೆ ನಿನಗಾಗಿ......

 ಸಿಗದ ಪ್ರೀತಿಯ ಕಡೆಗೆ

ಸಾಗುತಿದೆ ನನ್ನೊಲವಿನ ಪಯಣ....
ಮರೆಯಲಾಗದ ಆ ಕ್ಷಣಗಳಿಗೆ
ಸೋತಿದೆ ನನ್ನ ಈ ಮನ....


ಸುತ್ತಲು ಸುಳಿಯುವ ನೆನಪುಗಳಿಗೆ
ಶರಣಾಗಿದೆ ನನ್ನ ಒಂಟಿತನ....
ನೀ ಬಿಟ್ಟು ಹೋದ ಕನಸುಗಳಿಗೆ
ಅರ್ಪಿಥವಾಗಿದೆ ನನ್ನ ಈ ನಯನ....


ನೀ ದೂರಾದ ಹಾದಿಯಲ್ಲಿ
ಮೌನದಿ ಸಾಗಿದೆ ಜೀವನ....
ನೀ ಬರುವ ದಾರಿಯ
ಕಾಯುತ ಕುಳಿತಿದೆ ಈ ಪ್ರಾಣ....

Wednesday, 20 November 2024

ಹೇಗೆ..??

ಮೌನಕೆ ಸೆರೆಯಾದ
ಮಧುರ ಮಾತುಗಳ ಅರ್ಥ
ನಿನಗೆ ಹೇಳಲಿ ನಾ ಹೇಗೆ..??

ಎದೆಯಾಳದ ಬಡಿತದ
ಆ ಸುಂದರ ಭಾವನೆಗಳ
ನಿನಗೆ ತಿಳಿಸಲಿ ನಾ ಹೇಗೆ..??

ಕಣ್ಣುಗಳು ಕಟ್ಟಿದ
ಆ ಕನಸುಗಳ ಕೋಟೆಯಲಿ
ನಿನ್ನನು ನಿನಗೆ ತೋರಿಸಲಿ ನಾ ಹೇಗೆ..??

ಮನಸಿನ ನೋವನ್ನು
ನಿನ್ನ ನೆನಪಲ್ಲಿ ಮರೆಯುತ
ನಗುತ ಮುಂದೆ ಸಾಗಲಿ ನಾ ಹೇಗೆ..??

Thursday, 14 November 2024

ನೆನಪು....

 ನೆನಪಾಗುವುದು ನಿನ್ನ ಸವಿ ಸ್ಪರ್ಶ

ಈ ತಂಗಾಳಿ ಸೋಕಿದಾಗ.....

ನೆನಪಾಗುವುದು ನಿನ್ನ ಕಣ್ಣುಗಳು

ಆ ಚುಕ್ಕಿಗಳ ನಾ ನೋಡಿದಾಗ.....


ನೆನಪಾಗುವುದು ನಿನ್ನ ನಗುವು

ಅರಳುವ ಹೂವನ್ನು ನೋಡಿದಾಗ.....

ನೆನಪಾಗುವುದು ನಿನ್ನ ತುಂಟ ತನ

ಪುಟ್ಟ ಮಗುವನ್ನು ನೋಡಿದಾಗ.....


ನೆನಪಾಗುವದು ಆ ಕ್ಷಣಗಳು

ಪ್ರತಿಸಾರಿ ಈ ಹೃದಯ ಮಿಡಿದಾಗ.....

ಜೊತೆಯಾಗುವುದು ನಿನ್ನ ನೆನಪುಗಳು

ಒಂಟಿಯಾಗಿ ಜೀವನದಲ್ಲಿ ನಾ ಸಾಗುವಾಗ.....